ಅಭಿಪ್ರಾಯ / ಸಲಹೆಗಳು

ತುಂಗಭದ್ರಾ ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆಯ ಮೌಲ್ಯಮಾಪನ ವರದಿ

ತುಂಗಭದ್ರಾ ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆ,

(ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ, ತಾ : ಬಳ್ಳಾರಿ ಜಿ : ಕರ್ನಾಟಕ)

 

ಕರ್ನಾಟಕ ಸರ್ಕಾರ, ಜಲ ಸಂಪನ್ಮೂಲ ಇಲಾಖೆ, ಅಪರ ಮುಖ್ಯ ಕಾರ್ಯದರ್ಶಿಗಳು, ಬೆಂಗಳೂರು ಇವರ ಪತ್ರ ಸಂಖ್ಯೆ : ಜಸಂಇ/178 ಕೆಬಿಎನ್/2020 ದಿನಾಂಕ: 8.10.2020 ನಿರ್ದೇಶಿಸಿದಂತೆ ಮುಖ್ಯ ಇಂಜಿನೀಯರ್, ಕನೀನಿನಿ, ನೀರಾವರಿ ಕೇಂದ್ರ ವಲಯ, ಮುನಿರಾಬಾದ ಇವರ ಪತ್ರ ಸಂಖ್ಯೆ: ಮುಇಂ/ನೀಕೇಂವ/ಕನೀನಿನಿ/ತಾಂ.ಸ-2/ಸ.ಇಂ-10/2020-21/2463 ದಿನಾಂಕ:28.10.2020 ರಲ್ಲಿ ಸೂಚಿಸಿದಂತೆ ತುಂಗಭದ್ರಾ ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆ, ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಿಗೆ ಸಂಬಂದಿಸಿದ ಮೌಲ್ಯಮಾಪನವನ್ನು ವಾಲ್ಮಿ, ಧಾರವಾಡದಿಂದ ಕೈಗೊಂಡು ವರದಿ ಸಲ್ಲಿಸಲಾಗಿದೆ.

ಒಟ್ಟು 120 ರೈತರು / ಫಲಾನುಭವಿಗಳನ್ನು ಸಂಪರ್ಕಿಸಿ, ನೀರಿನ ಬಳಕೆ, ಕುಡಿಯಲು, ದನಕರುಗಳಿಗೆ ಮೈ ತೊಳೆಯಲು, ಬಟ್ಟೆ ತೊಳೆಯಲು ಮತ್ತು ದೈನಂದಿನ ಕಾರ್ಯ ಇತ್ಯಾದಿ ಕಾರ್ಯಗಳ ಬಗ್ಗೆ ವಿವರವನ್ನು 10 ಕೆರೆಗಳಿಗೆ ಸಂಬಂಧಿಸಿದ ಹಳ್ಳಿಗಳ ರೈತರಿಂದ ಪಡೆಯಲಾಯಿತು. ಅದರಂತೆ ಪ್ರಮುಖವಾಗಿ ನೀರಿನ ಬಳಕೆ, ಕೃಷಿ, ಅಂತರ್ಜಲ ಮರುಪೂರಣ ಹಾಗೂ ನೀರಿನ ಮೂಲಗಳ ಸದ್ಬಳಕೆ ಹಾಗೂ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಯ ವಿವರಗಳನ್ನು ಕೂಡಾ ಸಂಗ್ರಹಿಸಲಾಯಿತು. ಇದಕ್ಕೆ ಪ್ರಥಮ ಮಾಹಿತಿಯಾಗಿ ರೈತರಿಂದ ನೇರ ಮಾಹಿತಿಯನ್ನು ಸಮೀಕ್ಷೆ ಪಟ್ಟಿಯ ಮುಖಾಂತರ ಸಂಗ್ರಹಿಸಲಾಯಿತು ಹಾಗೂ ಎರಡನೇ ಮಾಹಿತಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳ ಸಹಯೋಗದೊಂದಿಗೆ ಹಳ್ಳಿಗಳ ಮೂಲ ಮಾಹಿತಿ, ಕೆರೆಗಳ ಮಾಹಿತಿ, ಮೀನುಗಾರಿಕೆ ಚಟುವಟಿಕೆ ಹಾಗೂ ಜನಸಂಖ್ಯೆ, ನೀರಿನ ಮೂಲಗಳು, ಕೃಷಿ ವಿಸ್ತೀರ್ಣ ಮತ್ತು ಅಂತರ್ಜಲದ ವಿವರಗಳನ್ನು ಪಡೆಯಲಾಯಿತು.


ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಈ ಕೆಳಗೆ ಸೂಚಿಸಿದ ನಾಲ್ಕು ಉದ್ದೇಶಗಳ ಆಧಾರದ ಮೇಲೆ ಸಮೀಕ್ಷೆ ಕೈಗೊಂಡು ಮೌಲ್ಯಮಾಪನ ವರದಿಯನ್ನು ತಯಾರಿಸಲಾಗಿದೆ. ವಿವರಗಳು ಈ ಕೆಳಗಿನಂತಿದೆ:

 

1) ಕೆರೆ ನೀರಿನ ಫಲಾನುಭವಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬದಲಾವಣೆಯ ವಿಶ್ಲೇಷಣೆ.
2) ನದಿ ನೀರಿನಿಂದ ಕೆರೆಗೆ ನೀರನ್ನು ತುಂಬಿಸಿ ಕೆರೆಗಳ ನೀರಿನ ಸಾಮರ್ಥ್ಯೆದಲ್ಲಾದ ವಿವರಗಳ ವಿಶ್ಲೇಷಣೆ.
3) ಕೆರೆ ನೀರಿನಿಂದ ಅಂತರ್ಜಲ ಮರುಪೂರ್ಣ ಮತ್ತು ಅದರ ಮಾಹಿತಿ ವಿಶ್ಲೇಷಣೆ.
4) ಕೆರೆ ನೀರಿನಿಂದ ಕುಡಿಯಲು, ನೀರಾವರಿ, ಮೀನುಗಾರಿಕೆ, ದನಕರುಗಳ ಬಳಕೆ ಹಾಗೂ ಕೆರೆಜೋಡಣೆ ಬಗ್ಗೆ ಮಾಹಿತಿಯ ವಿಶ್ಲೇಷಣೆ.
5) ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಬದಲಾವಣೆಯ ಪರಿಣಾಮ ಉದ್ಯೋಗ ಹಾಗೂ ಕೃಷಿ ಸಂಭAದಿಸಿದ ಚಟುವಟಿಕೆಗಳ ಆದಾಯದಲ್ಲಿನ ಹೆಚ್ಚಳದ ವಿಶ್ಲೇಷಣೆ.
6) ಕೆರೆ ನೀರಿನ ಫಲಾನುಭವಿಗಳು ಕೆರೆಯ ನಿರ್ವಹಣೆಯಲ್ಲಿ ಎದುರಿಸಿದ ಸಮಸ್ಯೆಗಳು ಹಾಗೂ ಸವಾಲುಗಳ ವಿಶ್ಲೇಷಣೆ.

 
ಯೋಜನೆಯ ಅಧ್ಯಯನದ ವಿವರ


ಈ ಯೋಜನೆ 2015 ರ ನಂತರ ಪ್ರಾರಂಭವಾಗಿದ್ದು, ಸಣ್ಣ ನೀರಾವರಿ ಯೋಜನೆಯ ಅಡಿಯಲ್ಲಿ ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಲು ಸಹಕಾರಿಯಾಗಿದೆ. 10 ಕೆರೆಗಳನ್ನು ಈ ಕೆಳಗಿನ ಕೋಷ್ಠಕದಲ್ಲಿ ನಮೂದಿಸಿದ್ದು, ಕನೀನಿನಿ ಮುನಿರಾಬಾದ ಮತ್ತು ಸಣ್ಣ ನೀರಾವರಿ ಇಲಾಖೆ ಹೂವಿನ ಹಡಗಲಿ ಇವರ ಸಹಯೋಗದೊಂದಿಗೆ ಯೋಜನೆ ಪ್ರಾರಂಭವಾಯಿತು. ಈ ಯೋಜನೆಯಲ್ಲಿ 10 ಕೆರೆಗಳಿಗೆ ಒಟ್ಟು 0.5 ಟಿ.ಎಂ.ಸಿ. ನೀರನ್ನು ಸುತ್ತಮುತ್ತಲಿನ ಹಳ್ಳಿಗಳ ನೀರಿನ ಬಳಕೆಗೆ ಭರ್ತಿ ಮಾಡಲಾಯಿತು. ಈ ಯೋಜನೆಯಿಂದ ಕೊಳವೆಭಾವಿ, ಬಾವಿಗಳ ಮತ್ತು ನೀರಿನ ಮೂಲಗಳ ಮರುಪೂರ್ಣದಿಂದ ಅಂತರ್ಜಲಮಟ್ಟ ಹೆಚ್ಚಾಗಲು ಸಹಾಯಕವಾಗಿದೆ. ಇದರ ಜೊತೆಗೆ ಕುಡಿಯಲು, ದನಕರುಗಳ ಬಳಕೆಗೆ, ಬಟ್ಟೆ ತೊಳೆಯಲು ಹಾಗೂ ಮೀನುಗಾರಿಕೆ ಚಟುವಟಿಕಗಳನ್ನು ನಡೆಸಲು ಅನುಕೂಲವಾಗಿದೆ. ಒಟ್ಟು 06 ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಯುತ್ತಿದ್ದು, ಅವುಗಳಿಂದ ಗ್ರಾಮ ಪಂಚಾಯತ್ ಆದಾಯ ಕಳೆದ ಐದು ವರ್ಷಗಳಲ್ಲಿ (2015-2020) ಒಟ್ಟು ರೂ. 9,86,884 ಗಳಷ್ಟು ಹೆಚ್ಚಳವಾಗಿದೆ. ಈ ಯೋಜನೆಯಿಂದ ಕೆರೆ ಸುತ್ತಮುತ್ತಲಿನ ಗ್ರಾಮಗಳಾದ ಹಗರನೂರು (13%) ಮತ್ತು ಹಿರೇಹಡಗಲಿ (17%) ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.


10 ಕೆರೆಗಳನ್ನು ನೀರು ತುಂಬಿಸುವ ಈ ಯೋಜನೆಯಿಂದ ಬೆಳೆ ಪದ್ಧತಿಯಲ್ಲಿ ಪರಿವರ್ತನೆ ಕೂಡಾ ಕಂಡುಬಂದಿದ್ದು, ಮೊದಲು ಆಹಾರ ಪದಾರ್ಥಗಳಾದ ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಯುತ್ತಿದ್ದ ಪ್ರದೇಶದಲ್ಲಿ ಭತ್ತ, ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನೀರು ಹೆಚ್ಚು ಬೇಡಿಕೆ ಇರುವ ಬೆಳೆಗಳಾದ ಭತ್ತ, ಕಬ್ಬು ಬೆಳೆಗಳನ್ನು ರೈತರು ಬೆಳೆಯಲು ಮುಂದಾಗಿದ್ದು, ಇದರಿಂದ ನೀರಿನ ಹೆಚ್ಚಿನ ವ್ಯಯ ಕಾಣಬಹುದಾಗಿದೆ. ಆದ್ದರಿಂದ ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಕೆ ಪ್ರಮುಖ ಪಾತ್ರ ವಹಿಸುತ್ತದೆ.

 

ತುಂಗಭದ್ರಾ ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆಯ ಮೌಲ್ಯಮಾಪನ ಅಧ್ಯಯನದ ವರದಿಯ ಫಲಿತಾಂಶಗಳು

 

 • ಹತ್ತು ಕೆರೆಗಳ ಒಟ್ಟು ಸಾಮರ್ಥ್ಯ 687.52 Mcft ಆಗಿದ್ದು, 2017-18 ರಿಂದ 2020-21 ಅವಧಿಯಲ್ಲಿ ಕೆರೆಯ ನೀರಿನ ಒಟ್ಟು ಸಾಮರ್ಥ್ಯದಲ್ಲಿ ಸರಾಸರಿ 623.34 Mcft (90.67%) ಹೆಚ್ಚಿನ ಬದಲಾವಣೆ ಕಂಡುಬಂದಿದೆ.

 • ಈ ಯೋಜನೆಯ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣದ ಹೆಚ್ಚಿನ ಪಾಲಿನ ನೀರಾವರಿಯೂ ಕೆರೆಯ ನೀರಿನ (71.51%) ಮೂಲವಾಗಿದ್ದು, ಉಳಿದಂತೆ ಕಾಲುವೆ (22.02%) ಮತ್ತು ಕೊಳವೆ ಬಾವಿ (6.47%)ಯ ನೀರಾವರಿಯನ್ನು ಅವಲಂಭಿಸಿದ್ದಾರೆ.

 • ಕೆರೆ ನೀರಿನ ಫಲಾನುಭವಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬದಲಾವಣೆ ವಿಶ್ಲೇಷಣೆ ಮಾಡಲಾಯಿತು. ಹೆಚ್ಚಿನ ರೈತರು ಸಣ್ಣ ಮತ್ತು ಮಧ್ಯಮ (75%) ಹಿಡುವಳಿದಾರರಾಗಿದ್ದಾರೆ, ಉಳಿದ ರೈತರು (25%) ದೊಡ್ಡ ಹಿಡುವಳಿದಾರರಾಗಿದ್ದಾರೆ.

 • ಫಲಾನುಭವಿಗಳ ಶೈಕ್ಷಣಿಕ ಮಟ್ಟವನ್ನು ವಿಶ್ಲೇಷಣೆ ಮಾಡಿದಾಗ 79% ಫಲಾನುಭವಿಗಳು ಶಿಕ್ಷಿತರಾಗಿರುತ್ತಾರೆ.

 • ಈ ಯೋಜನೆಯಿಂದ ಕುಡಿಯಲು ನೀರಿನ ಸೌಕರ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಕುಡಿಯುವ ನೀರಿನ ಟ್ಯಾಂಕ್‌ಗಳೂ ಹಾಗೂ ನೀರಿನ ನಳಗಳ ಸಂಖ್ಯೆಯಲ್ಲೂ ಏರಿಕೆ ಕಾಣಬಹುದಾಗಿದೆ. 2017-18 ರಲ್ಲಿ ಒಟ್ಟು 535 ನಳಗಳಿದ್ದು ನಂತರದಲ್ಲಿ 2020-21 ರಲ್ಲಿ 876 ನಳಗಳನ್ನು ಕಾಣಬಹುದಾಗಿದೆ.

 • ಈ ಯೋಜನೆಯಿಂದ ಒಟ್ಟು 8 OHT ಗಳು ಭರ್ತಿಯಾಗುತ್ತಿದ್ದು, 2,50,000 ಲೀಟರ್ ನೀರು ಕುಡಿಯುವ ಸಲುವಾಗಿ ಬಳಕೆಯಾಗುತ್ತಿದೆ, ತಲಾ ಒಬ್ಬರಿಗೆ 21.25 ಲೀ/ದಿನಕ್ಕೆ/ಒಬ್ಬರಿಗೆ ಕುಡಿಯಲು ನೀರು ಲಭ್ಯವಾಗುತ್ತಿದೆ.

 • ಈ ಯೋಜನೆಯಿಂದ ಹಳ್ಳಿಯ ಜನರಿಗೆ ಕುಡಿಯಲು ನೀರು, ದನಕರುಗಳ ಬಳಕೆಗೆ, ಬಟ್ಟೆ ತೊಳೆಯಲು ಹಾಗೂ ಮೀನುಗಾರಿಕೆ ಚಟುವಟಿಕಗಳನ್ನು ನಡೆಸಲು ಅನುಕೂಲವಾಗಿದೆ.

 • ಈ ಯೋಜನೆಯಿಂದ ಕೆರೆ ಸುತ್ತಮುತ್ತಲ್ಲಿನ ಗ್ರಾಮಗಳಾದ ಹಗರನೂರು (13.22%) ಮತ್ತು ಹಿರೇಹಡಗಲಿ (17.10%) ಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದೆ. ಇದರ ಪರಿಣಾಮವಾಗಿ ನೀರಿನ ಮೂಲಗಳಾದ ಕೊಳವೆಬಾವಿ, ಬಾವಿ ಮತ್ತು ಕೆರೆಗಳ ಅಂತರ್ಜಲಮಟ್ಟ ಹೆಚ್ಚಾಗಲು ಸಹಾಯಕವಾಗಿದೆ.

 • ಒಟ್ಟು 06 ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಯುತ್ತಿದ್ದು, ಅವುಗಳಿಂದ ಗ್ರಾಮ ಪಂಚಾಯತ್ ಆದಾಯ ಕೂಡ ಕಳೆದ ಐದು ವರ್ಷಗಳಲ್ಲಿ (2015-2020) ಒಟ್ಟು ಸರಾಸರಿ ರೂ. 9,86,884 ಗಳಷ್ಟು ಹೆಚ್ಚಳವಾಗಿದೆ.

 • ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳ ಹತ್ತು ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಯಿಂದ ಬೆಳೆ ಪದ್ಧತಿಯಲ್ಲಿ ಪರಿವರ್ತನೆ ಕೂಡಾ ಕಂಡುಬAದಿದ್ದು, ಮೊದಲು ಆಹಾರ ಪದಾರ್ಥಗಳಾದ ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಯುತ್ತಿದ್ದ ಪ್ರದೇಶದಲ್ಲಿ ಭತ್ತ, ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

 • ನೀರು ಹೆಚ್ಚು ಬೇಡಿಕೆ ಇರುವ ಬೆಳೆಗಳಾದ ಭತ್ತ, ಕಬ್ಬು ಬೆಳೆಗಳನ್ನು ರೈತರು ಬೆಳೆಯಲು ಮುಂದಾಗಿದ್ದು, ಇದರಿಂದ ನೀರಿನ ಹೆಚ್ಚಿನ ವ್ಯಯ ಕಾಣಬಹುದಾಗಿದೆ. ಆದ್ದರಿಂದ ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಕೆ ಪ್ರಮುಖ ಪಾತ್ರ ವಹಿಸುತ್ತದೆ.

 • ಈ ಯೋಜನೆಯಿಂದ ಫಲಾನುಭವಿಗಳ ಹಾಗೂ ಹಳ್ಳಿಯ ರೈತರ ಜೀವನಮಟ್ಟ ಸುಧಾರಿಸಿದ್ದು, ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಉದ್ಯೋದ ಪ್ರಮಾಣದಲ್ಲಿ ಶೇ.5.22 % ರಷ್ಟು ಏರಿಕೆ ಕಾಣಬಹುದಾಗಿದೆ.

 • ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ಕೃಷಿ ಸಂಭAದಿಸಿದ ಚಟುವಟಿಕೆಗಳಲ್ಲಿ ಶೇ.59.17 ರಷ್ಟು ಹಾಗೂ ಹೈನುಗಾರಿಕೆಯಲ್ಲಿ ಶೇ.23.97 ರಷ್ಟು ಆದಾಯದಲ್ಲಿ ಬದಲಾವಣೆ ಕಾಣಬಹುದು.

 

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೌಲ್ಯಮಾಪನ ಅಧ್ಯಯನ ವರದಿಯಲ್ಲಿ ಕಂಡು ಬಂದ ಸವಾಲುಗಳು ಮತ್ತು ಸಮಸ್ಯೆಗಳು

 

 • ಈ ಯೋಜನೆಯಡಿಯಲ್ಲಿ ಕಂಡು ಬರುವ ಬೆಳೆಗಳು ಹೆಚ್ಚು ನೀರು ಬೇಡಿಕೆಯುಳ್ಳ ಬೆಳೆ ಬೆಳೆಯುತ್ತಿರುವುದರಿಂದ ನೀರಿನ ಮಿತ ಬಳಕೆಯ ಕಡೆಗೆ ಗಮನ ಹರಿಸುವುದು ಸೂಕ್ತವಾಗಿದೆ. ತುಂತುರು ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಬೇಕಾಗಿದೆ.

 • ಹಿರೇ ಹಡಗಲಿ, ಹಗರನೂರು, ಹಿರೇ ಮಲ್ಲನಕೆರೆ, ಮತ್ತು ಮುದೇನೂರು ಹಳ್ಳಿಗಳಲ್ಲಿ ಕೆರೆಯ ಒತ್ತುವರಿ ಕೂಡಾ ಕಂಡುಬAದಿದ್ದು, ಕೆರೆಯ ಒತ್ತುವರಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

 • ಕೆರೆಯಲ್ಲಿ ನೀರು ಬಸಿ ಹೋಗುವುದು ಮತ್ತು ಪೋಲಾಗುವಿಕೆ ಸಮಸ್ಯೆಯು ಹಿರೇಹಡಗಲಿ ಮತ್ತು ಹಗರನೂರು ಹಳ್ಳಿಗಳಲ್ಲಿ ಕಂಡು ಬಂದಿದ್ದು, ಪೋಲಾಗುವುದನ್ನು ತಡೆಗಟ್ಟಬಹುದಾಗಿದೆ.

 • ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಜಾಲಿ, ಲಾಂಟಾನಾ ಕಳೆಗಳ ಸಮಸ್ಯೆ ಹೆಚ್ಚಾಗಿದ್ದು, ಅವುಗಳ ನಿರ್ವಹಣೆಯನ್ನು ಕೈಗೊಳ್ಳಬೇಕಾಗಿದೆ.

 • ಕೆರೆಗಳ ಬದುವಿನ ನಿರ್ಮಾಣ, ಸಣ್ಣ ರಂದ್ರಗಳ ಮುಖಾಂತರ ನೀರು ಪೋಲಾಗುವಿಕೆ ಸಮಸ್ಯೆಯಿಂದ ಕೆರೆಯ ಪಕ್ಕದ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಕೂಡಾ ಸಂಭವಿಸಿದ್ದು, ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ.

 • ಕೆರೆಗಳಲ್ಲಿ ಹಳ್ಳಿಗಳ ತ್ಯಾಜ್ಯ ಮತ್ತು ಕೊಳಕು ನೀರು ಕೆರೆಗೆ ಸೇರುತ್ತಿದ್ದು, ನೀರು ಮಲೀನವಾಗಿದ್ದು, ಅದರ ನಿರ್ವಹಣೆ ಮಾಡಬೇಕಾಗಿದೆ.

 • ಕೆರೆಯ ನೀರಿನ ನಿರ್ವಹಣೆ, ಬದುವಿನ ಸ್ಥಿತಿ, ಕಾಲುವೆಗಳ ಸ್ಥಿತಿ ಬಗ್ಗೆ ಬಳಕೆದಾರರಲ್ಲಿ ಅರಿವು ಮೂಡಿಸಿ, ಕೆರೆ ನೀರು ಬಳಕೆದಾರರ ಸಂಘಗಳ ಸ್ಥಾಪನೆಯ ಜೊತೆಗೆ ಅವರಿಗೆ ನೀರಿನ ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

 

ಇತ್ತೀಚಿನ ನವೀಕರಣ​ : 26-05-2022 12:33 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080