ಅಭಿಪ್ರಾಯ / ಸಲಹೆಗಳು

ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ

ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆಯನ್ನು ಸಾಫಲ್ಯಗೊಳಿಸುವ ನಿಟ್ಟಿನಲ್ಲಿ ವಾಲ್ಮಿ ವತಿಯಿಂದ ಮಾಡಿದ ಪ್ರಯತ್ನಗಳು


             ಕೃಷ್ಣಾ ಭಾಗ್ಯ ಜಲ ನಿಗಮದಿಂದ ರಾಮಥಾಳ (ಮರೋಳ) ಸೂಕ್ಷ್ಮ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಸದರಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ತರ  ಯೋಜನೆಯಾಗಿದ್ದು, ಕೇವಲ ಮಳೆಯಾಶ್ರಿತ ಬೆಳೆಯನ್ನೇ ನಂಬಿ ಬದುಕುತ್ತಿರುವ ಹುನಗುಂದ ತಾಲೂಕಿನ ರೈತರ ಶ್ರೇಯೋಭಿವೃದ್ಧಿಗಾಗಿ ಯೋಜಿಸಿದ ಯೋಜನೆಯಾಗಿದೆ. ಈ ಯೋಜನೆಯಡಿ ಮರೋಳ ಗ್ರಾಮದ ಹತ್ತಿರ ಕೃಷ್ಣಾ ನದಿಯ ಬಲ ದಂಡೆಯಿಂದ ಏತ ನೀರಾವರಿ ಮುಖಾಂತರ ನೀರನ್ನು ಎತ್ತಿ ಪೈಪುಗಳ ಸಹಾಯದಿಂದ ನೀರನ್ನು ಹೊಲಗಳಿಗೆ ಹಾಯಿಸಿ, ಹನಿ ನೀರಾವರಿ ವಿಧಾನದಿಂದ ನೀರಾವರಿ ಮಾಡಲಾಗುತ್ತಿದೆ. ಈ ಯೋಜನೆ ವ್ಯಾಪ್ತಿಯಲ್ಲಿ 60,000 ಎಕರೆ (26,200 ಹೆಕ್ಟೇರ್) ಪ್ರದೇಶ ಸೂಕ್ಷ್ಮ ನೀರಾವರಿಗೊಳಪಡುತ್ತಿದ್ದು, ರೈತರ ಬಾಳಿನ ಅಭ್ಯುದಯಕ್ಕೆ ದಾರಿಯಾಗಿದೆ. ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದರಿಂದ ಶೇ 60ರಷ್ಟು ನೀರಿನ ಉಳಿತಾಯವಾಗಿದ್ದು, ನೀರಿನ ಪ್ರಮಾಣಬದ್ಧ ವಿತರಣೆಯಾಗಿ ಸಾಮಾನ್ಯ ನೀರಾವರಿಯಿಂದಾಗುವ ಸಮಸ್ಯೆಗಳಿಂದ ಹೊರಬಂದಂತಾಗುತ್ತದೆ. ಸದರಿ ಯೋಜನೆಯನ್ನು ಮುಖ್ಯ ಇಂಜಿನೀಯರ್, ಕೃ.ಬಾ.ಜ.ನಿ.ನಿ, ಆಣೆಕಟ್ಟು ವಲಯ, ಆಲಮಟ್ಟಿ ಇವರ ಅಧೀನದಡಿ ಜಾರಿಯಾಗಿದ್ದು ಸಧ್ಯಕ್ಕೆ ಪ್ರಾರಂಭಿಕ ನಿರ್ವಹಣಾ ಹಂತದಲ್ಲಿದೆ.

 

         ಸದರಿ ಯೋಜನೆ ಜಾರಿಯಾದಾಗಿನಿಂದ ಹಲವು ಮಟ್ಟಗಳಲ್ಲಿ ಜೈನ್ ಹಾಗೂ ನೆಟಾಫಿಮ್ ಕಂಪನಿಯ ಅಧಿಕಾರಿಗಳಿಂದ ತರಬೇತಿ ಕಾರ್ಯಕ್ರಮಗಳು ನಡೆದಾಗ್ಯೂ, ರೈತರಲ್ಲಿ ಯೋಜನೆಯ ಕುರಿತ ಪೂರ್ಣಪ್ರಮಾಣದ ತಿಳುವಳಿಕೆಯಾಗಿರಲಿಲ್ಲ. ಯೋಜನೆಯನ್ನು ಜಾರಿಗೊಳಿಸುತ್ತಿರುವ ವಿಭಾಗೀಯ ಅಧಿಕಾರಿಗಳಾಗಲೀ ಅಥವಾ ಅವರಡಿ ಬರುತ್ತಿರುವ ಉಪ-ವಿಭಾಗೀಯ ಅಧಿಕಾರಿಗಳಾಗಲೀ ಸರ್ವ ಪ್ರಯತ್ನ ಮಾಡಿದಾಗ್ಯೂ ಯೋಜನೆಯ ಫಲಾನುಭವಿ ರೈತರ ಮನದಲ್ಲಿ ಯೋಜನೆಯ ಕುರಿತ ಸಂಪೂರ್ಣ ತಿಳುವಳಿಕೆ ಬಂದಿರಲಿಲ್ಲ. ಅದಕ್ಕಾಗಿ ಮಾನ್ಯ ಜಲ ಸಂಪನ್ಮೂಲ ಸಚಿವರ ಹಾಗೂ ಸರ್ಕಾರದ ಹಲವು ನಿರ್ದೇಶನಗಳನ್ವಯ ವಾಲ್ಮಿ ಸಂಸ್ಥೆ ತಜ್ಞರ ತಂಡದೊಂದಿಗೆ ಯೋಜನಾ ಪ್ರದೇಶವನ್ನು ಹಲವಾರು ಬಾರಿ ಪರಿವೀಕ್ಷಿಸಿ ಯೋಜನೆಯ ಕುರಿತ ಧನಾತ್ಮಕ ಚಿಂತನೆ ರೈತರಲ್ಲಿ ಮೂಡುವಂತೆ ಪ್ರಯತ್ನ ಮಾಡಲಾಗಿದೆ.

 

         ಯೋಜನೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ವಿಷಯ ಪರಿಶೀಲನೆಗಾಗಿ, ನೆಟಾಫೀಮ್ ಕಂಪನಿ ಅಡಿ ನೀರಾವರಿ ಆಗುತ್ತಿರುವ ಪ್ರದೇಶದಡಿ ಬರುವ ಹುನಗುಂದ ತಾಲ್ಲೂಕಿನ ಅಮೀನಗಡ ಹತ್ತಿರದ ಸುಳೇಬಾವಿ ಗ್ರಾಮದಲ್ಲಿ ಕ್ಷೇತ್ರ ಆಯ್ಕೆ ಮಾಡಿಕೊಂಡು ಮಾದರಿ ಬೆಳೆಯನ್ನು ಯಶಸ್ವಿಯಾಗಿ ಬೆಳೆಯಲಾಗುತ್ತಿದೆ.

 

 ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿದ ಲಿಂಕ್‌ ನ್ನು click ಮಾಡಿ

 

ರಾಮಥಾಳ (ಮರೋಳ) ಸೂಕ್ಷ್ಮ ನೀರಾವರಿ ಯೋಜನೆಯನ್ನು ಸಾಫಲ್ಯಗೊಳಿಸುವ ನಿಟ್ಟಿನಲ್ಲಿ ವಾಲ್ಮಿ ಪಾತ್ರ

 

ಇತ್ತೀಚಿನ ನವೀಕರಣ​ : 26-05-2022 12:13 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080